(ನನ್ನ ಚೊಚ್ಚಲ
ಸೀಸ ಪದ್ಯ- ಭಾಷೆಯಲ್ಲಿ ಹಳೆ-ಹೊಸಗನ್ನಡಗಳೆಲ್ಲ ಸೇರಿ ಅಡುಗೆಯ ಹೊಸರುಚಿಪ್ರಯೋಗದಂತೆ ಆಗಿದೆ.) (ಇಂದು ಈ ಪದ್ಯ ಬರೆಯಲು ಪ್ರಾರಂಭಿಸಿದ ವೇಳೆಗೇ ಸುಮಾತ್ರದಲ್ಲಿ ಕಾಕತಾಳೀಯವಾಗಿ ಭೂಕಂಪನವಾದದ್ದು ವಿಷಾದನೀಯ:-( )
ಭೂದೇವಿ ಭಾರದಿಂ ರೋಸಿಹಳು ಮೇಣ್ ವಿಷ್ಣು -
ವಿರಹದಿಂ ತಪ್ತಳೆಂತೆಂಬವೋಲೇ |
ಶ್ರೀದೇವಿಯೊಡನಿರ್ಪ ಮಚ್ಚರದಿ ಕೊನರಿ ತಾ
ಪೊರಮಟ್ಟು ನಿಂತಳೈ ಹರಿಯ ಕಡೆಗೆ |
ಕಾದು ಸೂರ್ಯನ ಬಿಸಿಗೆ ಕುದಿದು ಬಡಬಾನಲಕೆ
ಕಂಪಿಸಿರ್ಪಳು ಜನರ ಕ್ರೂರ ನಡೆಯಿಂ |
ಗುಡುಗಿ ತಾ ಕೊಡವಿದಳು ಸೌಧಗಳನರೆ ಕ್ಷಣದಿ
ಜಠರಾಗ್ನಿಗಾಹುತಿಯನಿಕ್ಕುತಿರ್ಪಳ್ ||
ಕಾಲವಶವಾಗಿರಲು ಬಂಧುಜೀವಿಗಳೆಲ್ಲವೂ
ರೋದಿಸುವರಿತ್ತಕಡೆ ಬದುಕಿರ್ಪ ಬಾಂಧವರ್ಗಳ್|
ಏನೀ ವಿಪರ್ಯಾಸ ? ಮಾಳ್ಪ ತಪ್ಪಿಗೆ ಪಡೆದುದಂ
ಕಂಡು ದುಃಖವ ಪೊಂದಿ, ವಿಧಿಯ ನಿಂದಿಸುವುದಲ್ತೇ?
-ಗಣೇಶ ಕೊಪ್ಪಲತೋಟ
ಸುಪರ್ :) ಭಾರೀ ಚಂದವಾಗಿದೆ :)
ಪ್ರತ್ಯುತ್ತರಅಳಿಸಿkanasu bidditta bhookampa agatte anta?
ಪ್ರತ್ಯುತ್ತರಅಳಿಸಿಈಶ್ವರ ಭಟ್ ಧನ್ಯವಾದಗಳು:-)
ಪ್ರತ್ಯುತ್ತರಅಳಿಸಿ@prasad hegde:-) ನಾನು ಕನಸು ಕಂಡಿದ್ದೆಲ್ಲಾ ನನಸಾಗ್ತ ಎಂತನ ಹಾಂಗಾದರೆ!!
ಪ್ರತ್ಯುತ್ತರಅಳಿಸಿE manushya na athihase inda..namma tayyi bhudevi kophitagondidale alwaa enanthiya..?
ಪ್ರತ್ಯುತ್ತರಅಳಿಸಿಸತ್ಯವಾದ ಮಾತು:-)
ಪ್ರತ್ಯುತ್ತರಅಳಿಸಿhttp://padyapaana.com/?p=1093#comment-4319 ದಲ್ಲಿ ಈ ಪದ್ಯಕ್ಕೆ ಶತಾವಧಾನಿ ಆರ್ ಗಣೇಶ್ ಅವರ ಪ್ರತಿಕ್ರಿಯೆ-
ಪ್ರತ್ಯುತ್ತರಅಳಿಸಿThis very neat seesa-padya of DVG style. Even the language and contents are decent. However, I expect even more innovative and imaginative imagery in your versification as you are capable enough of doing it so! haNNiruva marakkE kallu beeruvudu!!!
ಚೆಂದಿದ್ದು ಗಣೇಶ. ಅಭಿನಂದನೆ :-)
ಪ್ರತ್ಯುತ್ತರಅಳಿಸಿಧನ್ಯವಾದ ಪ್ರಶಸ್ತಿ:-)
ಪ್ರತ್ಯುತ್ತರಅಳಿಸಿ