ಹಿಂದಿನ ಪೋಸ್ಟ್ ನಲ್ಲಿ ತಿಳಿಸಿದ ಕಿರಾತಾರ್ಜುನೀಯದ ಮತ್ತೆರಡು ಚಾಟು ಶ್ಲೋಕಗಳು ಇಲ್ಲಿವೆ.
ಅವು ಗತ ಪ್ರತ್ಯಾಗತ ಅಥವಾ ಪ್ರತಿಲೋಮಾನುಲೋಮಪಾದ ರೂಪದವು. ಇಂಗ್ಲಿಷ್ ನಲ್ಲಿ palindrome sequence ಎನ್ನುತ್ತಾರೆ. ಅಂದರೆ ಆ ಶ್ಲೋಕಗಳ ಪಾದಗಳನ್ನು ಹಿಂದೂ ಮುಂದಾಗಿ ಓದಿದರೂ ಅದೇ ರೀತಿಯಲ್ಲೇ ಇರುತ್ತದೆ.
ಅವುಗಳೆಂದರೆ
ವೇತ್ರ ಶಾಕಕುಜೇ ಶೈಲೇ ಲೇಶೈ ಜೇ ಕುಕ ಶಾತ್ರ ವೇ
ಯಾತ ಕಿಂ ವಿದಿಶೋ ಜೇತುಂ ತುಂಜೇಶೋ ದಿವಿ ಕಿಂ ತಯಾ
ಅದರ ಅರ್ಥ
(ಷಣ್ಮುಖ, ಅರ್ಜುನ ಮತ್ತು ಪ್ರಮಥ ಗಣಗಳ ನಡುವೆ ಯುದ್ಧ ನಡೆಯುತ್ತಿದ್ದಾಗ ಹೇಳುವುದು)
ಸ್ವರ್ಗದಲ್ಲಿ ತುಂಜ(ದೈತ್ಯ)ರನ್ನು ಗೆಲ್ಲಲು ಸಮರ್ಥರಾದ ಪ್ರಮಥರೇ ಬೆತ್ತದ ರೂಪದಲ್ಲಿಯೂ ಒರಟಾಗಿಯೂ ಇರುವ ಗಿಡಗಳಿರುವ ಅಲ್ಲಾಡದಿರುವ (ನಿಮ್ಮನ್ನು) ಹಿಡಿಯಲು ಅಸಮರ್ಥನಾದ ಶತ್ರುವಿರುವ ಈ ಪರ್ವತದಲ್ಲಿ ನಿಂದೆಯಿಂದ ಯುಕ್ತರಾಗಿ ದಿಕ್ಕಿನ ಮೂಲೆಗಳನ್ನು ಗೆಲ್ಲಲು ಹೋಗುತ್ತಿರುವಿರಾ?)
(ಪುಸ್ತಕ - ಸಂಸ್ಕೃತ ಭಾಷಾ ಶಾಸ್ತ್ರ ಮತ್ತು ಸಾಹಿತ್ಯ )
देवाकानिनि कावादे
वाहिकास्वस्वकाहि वा ।
काकारेभभरे का का
निस्वभव्यव्यभस्वनि ॥
Translation: "O man who desires war! This is that battlefield which excites even the gods, where the battle is not of words. Here people fight and stake their lives not for themselves but for others. This field is full of herds of maddened elephants. Here those who are eager for battle and even those who are not very eager, have to fight."
(wikipedia)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ