ನಿನ್ನೆ ತಾನೇ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಿಸಿದ್ದನ್ನು ಎಲ್ಲರೂ ಕೇಳಿರಬಹುದು.. ಇದು ಕನ್ನಡ ಭಾಷೆಗೆ ತೋರಿದ ಅತ್ಯುತ್ತಮ ಗೌರವವಾಗಿದೆ.
ಪ್ರತಿ ವರ್ಷ ಕೂಡ ಭಾರತದ ಸಂವಿಧಾನದಲ್ಲಿ ಹೇಳಿದ ಹದಿನೆಂಟು ಭಾಷೆಗಳ ಸಾಹಿತ್ಯಕ್ಷೇತ್ರದಲ್ಲಿ ಮಾಡಿದ ಅತ್ಯುನ್ನತ ಸಾಧನೆಗೆ ಈ ಪ್ರಶಸ್ತಿ ಕೊಡಲಾಗುತ್ತದೆ. ಪ್ರತಿವರ್ಷ ಸಲಹಾ ಸಮಿತಿ ಬೇರೆ ಬೇರೆ ಭಾಷೆಯ ಒಬ್ಬ ಕವಿ/ಸಾಹಿತಿ/ಲೇಖಕರ ಒಂದೊಂದು ಕೃತಿಯನ್ನು ಆ ವರ್ಷದ ಜ್ಞಾನಪೀಠ ಪ್ರಶಸ್ತಿಗೆ ಸೂಚಿಸುತ್ತದೆ. ಅದರಲ್ಲಿ ಅತ್ಯುನ್ನತವಾದ ಕೃತಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಒಂದೊಮ್ಮೆ 'ಆ ಕೃತಿಗಳಲ್ಲಿ ಯಾವುದು ಶ್ರೇಷ್ಠ' ಎಂದು ನಿರ್ಣಯಿಸುವಲ್ಲಿ ಒಂದು ನಿರ್ಧಾರಕ್ಕೆ ಬರಲಾಗದಾದಾಗ ಆ ಲೇಖಕರ ಸಮಗ್ರ ಸಾಹಿತ್ಯವನ್ನು ಅವಲೋಕಿಸುತ್ತಾರೆ ಹಾಗೂ ಅದರಲ್ಲಿ ಯಾರ ಕೃತಿಗಳು ಪ್ರೌಢವಾಗಿವೆ ಎಂದು ಅವಲೋಕಿಸಿ ಪ್ರಶಸ್ತಿ ಕೊಡುತ್ತಾರೆ. ಈ ಪ್ರಶಸ್ತಿ ಐದು ಲಕ್ಷ ರೂಪಾಯಿ ನಗದು ಹಾಗೂ ಪ್ರಮಾಣಪತ್ರ ಜೊತೆಗೆ ಕಂಚಿನ ಒಂದು ವಾಗ್ದೇವಿಯ ಪ್ರತಿಮೆಯನ್ನು ಒಳಗೊಂಡಿರುತ್ತದೆ.. ಈ ಪ್ರಶಸ್ತಿಯ ಸಂಸ್ಥಾಪಕರು ಶ್ರೀ ಸಾಹು ಶಾಂತಿ ಪ್ರಸಾದ ಜೈನ ಹಾಗೂ ಅವರ ಪತ್ನಿ ಶ್ರೀಮತಿ ರಮಾ ಜೈನ್. ಇದನ್ನು 1961ರಲ್ಲಿ ಸ್ಥಾಪಿಸಿದರು.
ಇದುವರೆಗೆ ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ಕನ್ನಡದ ಕವಿಗಳೇ ಹೆಚ್ಚಾಗಿದ್ದರು. ಇದು ನಮಗೆಲ್ಲ ಹೆಮ್ಮೆಯ ವಿಷಯ. ಎರಡನೇ ಸ್ಥಾನವನ್ನು ಹಿಂದಿ ಭಾಷೆ ಪಡೆದುಕೊಂಡಿತ್ತು. ಬಹುಶಃ 2005ರಲ್ಲಿ ಎರಡೂ ಭಾಷೆಗಳು ಏಳೇಳು ಪ್ರಶಸ್ತಿ ಪಡೆದು ಸಮಾನವಾಗಿದ್ದವು. ಆ ನಂತರ ಹಿಂದಿಗೆ ಮತ್ತೆರಡು ಪ್ರಶಸ್ತಿಗಳು ಬಂದು ಈಗ 9 ಪ್ರಶಸ್ತಿ ಪಡೆದು ಅದು ಮೊದಲ ಸ್ಥಾನದಲ್ಲಿದೆ. ಕನ್ನಡ ಭಾಷೆಯ ಕೀರ್ತಿಪತಾಕೆಯನ್ನು ನಭದೆತ್ತರಕ್ಕೆ ಹಾರಿಸಿದ ಇವರೆಲ್ಲರಿಗೂ ನಮ್ಮ ವಂದನೆಗಳು ಹಾಗೂ ಅಭಿನಂದನೆಗಳು......
ಇದುವರೆಗೆ ಕನ್ನಡಕ್ಕೆ ಬಂದ ಜ್ಞಾನಪೀಠ ಪ್ರಶಸ್ತಿಗಳ ವಿವರ ಇಲ್ಲಿದೆ.
1. ಡಾ|| ಕೆ.ವಿ. ಪುಟ್ಟಪ್ಪ (ಕುವೆಂಪು) - ಕೃತಿ- ಶ್ರೀ ರಾಮಾಯಣ ದರ್ಶನಂ- 1967 ರಲ್ಲಿ
3.ಡಾ|| ಶಿವರಾಮ ಕಾರಂತ- ಕೃತಿ- ಮೂಕಜ್ಜಿಯ ಕನಸುಗಳು (ಕಾದಂಬರಿ)-1977 ರಲ್ಲಿ

2 ಡಾ|| ದ. ರಾ ಬೇಂದ್ರೆ (ಅಂಬಿಕಾತನಯ ದತ್ತ)- ಕೃತಿ- ನಾಕುತಂತಿ-1973ರಲ್ಲಿ
3.ಡಾ|| ಶಿವರಾಮ ಕಾರಂತ- ಕೃತಿ- ಮೂಕಜ್ಜಿಯ ಕನಸುಗಳು (ಕಾದಂಬರಿ)-1977 ರಲ್ಲಿ
4.ಡಾ|| ಮಾಸ್ತಿ ವೆಂಕಟೇಶ ಅಯ್ಯಂಗಾರ (ಶ್ರೀನಿವಾಸ)- ಕೃತಿ- ಚಿಕವೀರ ರಾಜೇಂದ್ರ (ಕಾದಂಬರಿ)- 1983 ರಲ್ಲಿ
5.ಡಾ||ವಿ.ಕೃ. ಗೋಕಾಕ (ವಿನಾಯಕ ಕೃಷ್ಣ ಗೋಕಾಕ)- ಕೃತಿ- ಭಾರತಸಿಂಧು ರಶ್ಮಿ (ಮಹಾಕಾವ್ಯ) -1983ರಲ್ಲಿ
6. ಡಾ||ಯು. ಆರ್ ಅನಂತಮೂರ್ತಿ- ಸಮಗ್ರಸಾಹಿತ್ಯಕ್ಕೆ-1994 ರಲ್ಲಿ
7. ಡಾ|| ಗಿರೀಶ ಕಾರ್ನಾಡ - ಸಮಗ್ರಸಾಹಿತ್ಯಕ್ಕೆ -1998 ರಲ್ಲಿ
8 ಡಾ|| ಚಂದ್ರಶೇಖರ ಕಂಬಾರ - ಸಮಗ್ರಸಾಹಿತ್ಯಕ್ಕೆ -2010 ರಲ್ಲಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ