Powered By Blogger

ಭಾನುವಾರ, ಜನವರಿ 20, 2013

ಅವಧಾದಲ್ಲಿ ಚಿತ್ರಕವಿತೆ- ಸುದರ್ಶನಚಕ್ರ ಬಂಧನಿನ್ನೆ ದಿನಾಂಕ 19-1-2013ರ ಸಂಜೆ  ಹೆಬ್ಬಾಳದ ಜಿಕೆವಿಕೆ ಕಾಲೇಜಿನಲ್ಲಿ ನಡೆದ ಶತಾವಧಾನಿ ಡಾ|| ಆರ್ ಗಣೇಶ ಅವರ ಅಷ್ಟಾವಧಾನದಲ್ಲಿ ನಾನು ಚಿತ್ರಕವಿತೆಗೆ ಕೇಳಿದ ಪ್ರಶ್ನೆ- ವಿಷ್ಣುಸ್ತುತಿಯನ್ನು ಸುದರ್ಶನಚಕ್ರ ಬಂಧದಲ್ಲಿ ಮಾಡಬೇಕೆಂದು. ಅದಕ್ಕೆ ಅವರು ರಚಿಸಿದ ಪದ್ಯ ಹೀಗಿದೆ-
ಅನುಷ್ಟುಪ್||
ಸದಾಹ್ಲಾದಾ ಚಿದಾಸ್ವಾದಾ
ಸದಾನಂದಾ ಮದಾನುದಾ|
ಸದಾರಾ ದಾನದಾಮೋದಾ
ಸದಾರ್ಢ್ಯಾದಾಲ್ಬ್ಯಾದಾಮದಾ ||

ಬಂಧದ ಗತಿಯನ್ನು ಕೆಳಗಣ ಚಿತ್ರದಲ್ಲಿ ಕಾಣಬಹುದು-

ಅವಧಾನಿಗಳ ಪದ್ಯದ ಚಿತ್ರ  
ನನ್ನ ಪದ್ಯ ಹೀಗಿತ್ತು-
ಮಾಪಭೂಪನೆ ಪದ್ಯಕ್ಕ-
ಮಾಪಗೋಪಮ ಪಙ್ಕ್ತಿಯಂ|
ಮಾಪಾರ್ಶ್ವಪಾನ್ಥಪಾರಮ್ಯ
ಮಾಪೊಳ್ಳಂ ಪೊಯ್ದು ಪೊಣ್ಮಿಸೈ||
ನನ್ನ ಪದ್ಯದ ಚಿತ್ರ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ