ಬರೆದವೋ-ಖಾಲಿಯೋ? ಮರೆತೇ ಬಿಟ್ಟೆ!
ಕರಿಯವೋ-ಬಿಳಿಯವೋ? ಬಣ್ಣಬಣ್ಣದವುಗಳ
ದಾರದಿಂದ ಗಂಟುಕಟ್ಟಿ ಸುತ್ತಿ ಬಿಟ್ಟೆ ಬಿಳಿಬಟ್ಟೆ!
ಒಳಗಿನಾ ಬಣ್ಣ ಮರೆಮಾಚಿದ ಮೋಸ ನಂದಲ್ಲ!
ಬಣ್ಣಗಳ ವ್ಯತ್ಯಾಸ ತಿಳಿಯದವ ನಾನಲ್ಲ!
ಬಣ್ಣಗಳ ವ್ಯತ್ಯಾಸ ತಿಳಿಯದವ ನಾನಲ್ಲ!
ಒಂದರ ಬಣ್ಣ ಇನ್ನೊಂದಕ್ಕೆ; ಅದರ ಬಣ್ಣ ಮತ್ತೊಂದಕ್ಕೆ
ಬಳಿಯಲೂ ಬಹುದು, ಇಲ್ಲದೆಯೂ ಇರಬಹುದು.
"ದೇಶದ ಮಾದರಿಗೆ ಇದನ್ನು ತೋರಿಸುವೆ
ಎಲ್ಲರನು ಛೇಡಿಸಿ ಬಣ್ಣ ಬಯಲಿಗೆಳೆಯುವೆ"
ಇತ್ಯಾದಿ ಬಯಕೆಯಲ್ಲ!!
"ಮೂಢ ಜನರೇ ನಿಮ್ಮತನ ನಿಮ್ಮಲ್ಲಿರಲಿ
ಹೇರಬೇಡಿರಿ ಇತರರಿಗೆ, ಅವರಿಷ್ಟ ಅವರಿರಲಿ!"
ಎಂದು ಹೇಳಲೂ ಅಲ್ಲ!
ಕಲಿಸಬೇಕಿರುವವ ನಾನಲ್ಲ!
"ನಿಮ್ಮ ಗುದ್ದಾಟದಲಿ ಬಣ್ಣ ಬಳಿಯುವ ನೆಪದಲ್ಲಿ
ಶುಭ್ರವಾಗಿಹ ಹೊರಬಟ್ಟೆ ಹೊಲಸಾಗದಿರಲಿ!
ದೇಶದ ಭದ್ರತೆ ಹಾಳಾಗದಿರಲಿ
ನಮ್ಮಲ್ಲಿ ಇಕ್ಕಟ್ಟು ಬಿಕ್ಕಟ್ಟು ಬಿಟ್ಟು ಒಗ್ಗಟ್ಟು ಬರಲಿ!"
ಇದನ್ನು ಹೇಳಿ ಕಲಿಸಲು ಇವರೆಲ್ಲ ಚಿಕ್ಕವರಲ್ಲ!
ಸೇರಿಸಿಟ್ಟಿಹೆ ನಾನು ಹತ್ತೆಂಟು ಪುಟಗಳ!
ಏಕೆಂದರೆ ಇಷ್ಟೇ " ರದ್ದಿಯೊಡನೆ ಸೇರಿ ಕಸವಾಗದಿರಲಿ!
ಗಾಳಿಯಲಿ ಹಾರಿ ದೂರವಾಗದಿರಲಿ
ಕಳೆದು ಮತ್ತೆ ಹುಡುಕುವ ಸ್ಥಿತಿ ಬಾರದಿರಲಿ!!"
ದೇಶದ ಭದ್ರತೆ ಹಾಳಾಗದಿರಲಿ
ನಮ್ಮಲ್ಲಿ ಇಕ್ಕಟ್ಟು ಬಿಕ್ಕಟ್ಟು ಬಿಟ್ಟು ಒಗ್ಗಟ್ಟು ಬರಲಿ!"
ಇದನ್ನು ಹೇಳಿ ಕಲಿಸಲು ಇವರೆಲ್ಲ ಚಿಕ್ಕವರಲ್ಲ!
ಸೇರಿಸಿಟ್ಟಿಹೆ ನಾನು ಹತ್ತೆಂಟು ಪುಟಗಳ!
ಏಕೆಂದರೆ ಇಷ್ಟೇ " ರದ್ದಿಯೊಡನೆ ಸೇರಿ ಕಸವಾಗದಿರಲಿ!
ಗಾಳಿಯಲಿ ಹಾರಿ ದೂರವಾಗದಿರಲಿ
ಕಳೆದು ಮತ್ತೆ ಹುಡುಕುವ ಸ್ಥಿತಿ ಬಾರದಿರಲಿ!!"