ಶುಕ್ರವಾರ, ಏಪ್ರಿಲ್ 20, 2012

ಭವದ ಜೀವನದೊಳಗೆ ಬರುವ ದುಃಖಕೆ ಮರುಗಿ
ಕವಿಯೀವ ಕಷ್ಟಕ್ಕೆ ಹೆದರಿ ಹಿಂಜರಿದೊಡೀ|
ಭುವಿಯೊಳಗೆ ಸಾಧಿಸುವ ವಾಂಛೆಯಂ ತೊರೆದುಬಿಡು
ಹವಿಯಾಯ್ತು ನಿನ್ನ ಮನ ಪರರ ಛಲಕೆ||

(ಈ ಭವದ ಜೀವನದಲ್ಲಿ ಬರುವ ದುಃಖಗಳಿಗೆಲ್ಲ ಮರುಗಿ, ಬ್ರಹ್ಮ ಕೊಡುವ ಕಷ್ಟಗಳಿಗೆಲ್ಲ ಹೆದರಿ ಹಿಂಜರಿಯುತ್ತಿದ್ದರೆ ಈ ಭೂಮಿಯಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಆಸೆಯನ್ನು ತೊರೆಯುವುದೇ ಒಳ್ಳೆಯದು. ಯಾಕೆಂದರೆ ಆಗಲೇ ನಿನ್ನ ಮನಸ್ಸು ಬೇರೆಯಾರದೋ ಛಲಕ್ಕೆ ಹವಿಸ್ಸಿನಂತಾಗಿರುತ್ತದೆ; ಅವರ ಸಾಧನೆಗೆ ನಿನ್ನ ಮನಸ್ಸು ಆಹಾರವಾಗಿರುತ್ತದೆ.)
(ಕಗ್ಗದ ಮಾದರಿಯಲ್ಲಿ)

1 ಕಾಮೆಂಟ್‌: